ಹೆಲಿಯೋಡೋರಸ್ ಗರುಡಗಂಬವು ಕ್ರಿ.ಪೂ. ೧೧೩ ರ ಸುಮಾರಿಗೆ ಮಧ್ಯ ಭಾರತ ದ ವಿದಿಶಾದ ಇಂದಿನ ಬೆಸ್ನಗರದ ಹತ್ತಿರ , ಶುಂಗ ದೊರೆ ಭಾಗಭದ್ರನ ಆಸ್ಥಾನದಲ್ಲಿನ ಇಂಡೋ-ಗ್ರೀಕ್ ದೊರೆಯಾದ ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್ ನ ರಾಯಭಾರಿ ಹೆಲಿಯೋಡೋರಸ್ ಎಂಬಾತನು ಸ್ಥಾಪಿಸಿದ ಕಲ್ಲಿನ ಕಂಬವಾಗಿದೆ. ಈ ಜಾಗವು ಸಾಂಚಿಯ ಬೌದ್ಧ ಸ್ತೂಪದಿಂದ ಕೇವಲ ಐದು ಮೈಲಿಗಳ ಅಂತರದಲ್ಲಿದೆ. ಕಂಬದ ಮೇಲುಗಡೆ ಗರುಡನ ಕೆತ್ತನೆ ಇದ್ದು , ಇದನ್ನು ಹೆಲಿಯೋಡೋರಸ್ ನು ದೇವನಾದ ವಾಸುದೇವ ನಿಗೆ ಅರ್ಪಿಸಿದ್ದಾನೆ . ಇದು ವಾಸುದೇವ ಮಂದಿರದ ಮುಂದುಗಡೆ ಇದೆ. == ಶಾಸನಗಳು == ಕಂಬದ ಮೇಲೆ ಎರಡು ಶಾಸನಗಳಿವೆ . ಮೊದಲ ಬರಹವು ಬ್ರಾಹ್ಮಿ ಲಿಪಿಯಲ್ಲಿದ್ದು ಹೆಲಿಯೋಡೋರಸ್ , ಇಂಡೋ-ಗ್ರೀಕ್ ರಾಜ್ಯ , ಮತ್ತು ಶುಂಗ ಸಾಮ್ರಾಜ್ಯದೊಂದಿಗಿನ ಅವನ ಸಂಬಂಧದ ಕುರಿತಾಗಿದೆ. " ದೇವದೇವಸ ವಾಸುದೇವಸ ಗರುಡಧ್ವಜೋ ಅಯಂ ಕರಿತೊ ಹೋಲಿಯೋದರೇಣ ಭಾಗ- ವತೇನ ದಿಯಸ್ಯ ಪುತ್ರೇಣ ತಾಖಶಿಲಕೇನ ಯೋನದತೇನ ಆಗತೇನ ಮಹಾರಾಜಸ ಅಂತಲಿಕಸ ಉಪತಾ ಸಂಕಾಸಂ-ರಣೋ ಕಾಶೀಪುತ್ರಸ ಭಾಗಭದ್ರಸ ತ್ರಾತಾರಸ ವಸೇನ ಚತುರ್ದಶೇನ ರಾಜೇನ ವಧಮಾನಸ '' — ಮೂಲಬರಹ ತನ್ನ ಆಳಿಕೆಯ ಹದಿನಾಲ್ಕನೇ ವರ್ಷದಲ್ಲಿ ವರ್ಧಮಾನನಾಗಿರುವ ತ್ರಾತಾರನಾದ ಕಾಶೀಪುತ್ರ ಭಾಗಭದ್ರ ರಾಜನೆಡೆಗೆ ಅಂಟಾಲಿಕಿಡಾಸ್ ಮಹಾರಾಜನಿಂದ ಪ್ರೇಷಿತನಾಗಿ ಯವನದೂತನಾಗಿ ಬಂದ, ಡಿಯಾನ್ ಎಂಬವನ ಪುತ್ರನಾದ, ತಕ್ಷಶಿಲೆಯ ನಿವಾಸಿಯಾದ, ಭಾಗವತನಾದ ಹೆಲಿಯೋಡೋರ್ ನಿಂದ ದೇವದೇವನಾದ ವಾಸುದೇವನಿಗೆ ಈ ಗರುಡಧ್ವಜವು ಸ್ಥಾಪಿಸಲ್ಪಟ್ಟಿತು. ಇಲ್ಲಿ ಸ್ಪಷ್ಟವಾಗಿರದಿದ್ದರೂ ಕೂಡ ಈ ಶಾಸನವು , ಹೆಲಿಯೋಡೋರಸ್ ನು ಒಬ್ಬ ಭಾಗವತ ಅಂದರೆ 'ಭಗವಂತನ ಭಕ್ತ'ನು ಎಂದು ಸೂಚಿಸುತ್ತದೆ. ಕಂಬದ ಮೇಲಿನ ಎರಡನೇ ಶಾಸನವು ಹೆಲಿಯೋಡೋರಸ್ ನ ನಂಬುಗೆಯ ಧರ್ಮದ ಆಧ್ಯಾತ್ಮಿಕ ತಿರುಳನ್ನು ವಿಸ್ತಾರವಾಗಿ ವಿವರಿಸುತ್ತದೆ. " ತ್ರೀಣಿ ಅಮೃತಪದಾನಿ (ಸು)ಅನುಸ್ಥಿತಾನಿ ನಯಂತಿ ಸ್ವಗೋ ಧಮೋ ಅಪ್ರಮದೋ — ಮೂಲಬರಹ ದಮ, ತ್ಯಾಗ, ಅಪ್ರಮಾದ - ಈ ಮೂರು ಅಮೃತಪದಗಳು ಅನುಷ್ಠಿತವಾದರೆ - ಅವು (ಅನುಷ್ಠಾನ ಮಾಡಿದವನನ್ನು ) ಸ್ವರ್ಗಕ್ಕೆ ಒಯ್ಯುತ್ತವೆ == ಮಹತ್ವ == ಹೆಲಿಯೋಡೋರಸ್ ಮತ್ತು ಸಮಕಾಲೀನ ಅಗತೋಕ್ಲಸ್ ಇವರುಗಳು ಹಿಂದೂಧರ್ಮ ದ ವೈಷ್ಣವ ಪಂಥಕ್ಕೆ ದಾಖಲಾದ ಅತಿಮೊದಲಿನ ಮತಾಂತರಿಗಳು ಎನ್ನಬಹುದು. ಕೆಲ ವಿದ್ವಾಂಸರ ಅಬಿಪ್ರಾಯದಂತೆ ಅವನನ್ನು ಇವತ್ತಿಗೂ ಇರುವ ಶಿಲಾಸ್ತಂಭವೊಂದ ಸ್ಥಾಪಕನಾಗಿರುವನಾದರೂ ಭಾಗವತ-ಕೃಷ್ಣ ಪಂಥಕ್ಕೆ ಮೊದಲ ಮತಾಂತರಿ ಎನ್ನಲಾಗದು. ಅವನನ್ನು ರಾಯಭಾರಿಯನ್ನಾಗಿ ಕಳಿಸಿದ ರಾಜನೂ ಸೇರಿ ಅನೇಕ ಜನರು ಕೂಡ ಭಾಗವತ ಸಂಪ್ರದಾಯದ ಅನುಯಾಯಿಗಳೇ. == ಇವನ್ನೂ ನೋಡಿ == ಭಾಗವತ ಹಿಂದೂ ಧರ್ಮದ ಇತಿಹಾಸ ಅಂತಲಿಕಿತ == ==